ಶನಿವಾರ, ಡಿಸೆಂಬರ್ 26, 2009

ಅರಳಿದ ಕಣ್ಣಿನಲಿ

1.
ಹೆಪ್ಪುಗಟ್ಟಿದ ಮೋಡ ಮಳೆ ಸುರಿಸಿತು
ಭಾರವಾದ ದು:ಖ ಕಣ್ಣೀರು ಹರಿಸಿತು
ತಿಳಿಯಾದ ಆಗಸ
ಹಗುರವಾದ ಹೃದಯ
ತಣಿದ ಇಳೆ
ಹಸಿರು ತುಂಬಿತು ಅರಳಿದ ಕಣ್ಣಿನಲಿ

2.
ತೊಟ್ಟಿಲಿಗೆ
ಸೂರ್ಯಕಾಂತಿ ಹರಿದಾಳೆ
ಬೆಡಗು ಬಿನ್ನಾಣಗಿತ್ತಿಯರು ಕನಸ ನೆಟ್ಯಾರೆ
ತನು ಕೆಂಪು, ಮನ ತಂಪು
ಮುಂಗಾರಿನ ಜೊತೆ ಓಕುಳಿಯಾಟ
ಸರಸ ಸಲ್ಲಾಪ

3.
ಯೋಧರಂತೆ ನಿಂತ ನಾರಿಯರು
ಎಚ್ಚರದ ಸ್ಥಿತಿ
ತನು ಮನ ಒಂದಾಗಿತ್ತು
ಎಲ್ಲರು ತಮ್ಮ ತಮ್ಮ ಇಷ್ಟಕ್ಕೆ
ಕೂಡಿ ನಡೆಯುತ್ತಿದ್ದಾರೆ
ಸಂತಸ ಸಂಭ್ರಮದ ಮನೆಯಲ್ಲಿ

( ಡಿಸೆಂಬರ್ 2006 ರ ಮಯೂರದಲ್ಲಿನ 'ಕಲ್ಪನೆ' ವಿಭಾದಲ್ಲಿ ಪ್ರಕಟಗೊಂಡ ಪದ್ಯಗಳು. ಲೋಕೇಶ್ ಮೊಸಳೆ ಅವರ ಚಿತ್ರಕ್ಕೆ ಬರದದ್ದು. )

ಕ್ಷಮೆ

ನಾನು ಕ್ಷಮೆ ಬೇಡಿದೆ
ನೀವು ಕ್ಷಮಿಸಿದಿರಿ...
ಹೃದಯದಲ್ಲಿನ ದುಗುಡ, ಅಸಹನೆ...ಕಡಿಮೆ ಆಗಿಲ್ಲ,
ಗಾಯ ಮಾಸುತ್ತಿಲ್ಲ...?
ಬಹುಶ:....
ನನ್ನ ತಪ್ಪನ್ನ ನಾನೇ ಕ್ಷಮಿಸಿಲ್ಲ?
ರಾಜಿ.

Photo Courtesy: tsdi.wordpress.com, blogtext.org, 4catholiceducators.com, aboundlessworld.com,
davekat.net, sodahead.com, covershut.com, palomapentarian.wordpress.com, rkpaulbengalart.com

ಮಂಗಳವಾರ, ಡಿಸೆಂಬರ್ 1, 2009