ಭಾನುವಾರ, ಅಕ್ಟೋಬರ್ 2, 2011

ಸಾಗರೋಲ್ಲಂಗನ


ಕಿಂಗ್ ಫಿಶರ್ ನ ಗಮ್ಮತ್ತಿನಲ್ಲಿ ತೇಲುತಿದ್ದೆ
ಹಾರುವ ಖುಶಿ, ಬೀಳುವ ಆತಂಕದಲಿ
ನಲುಗುತ್ತಿರುವಾಗ
ನಲಿಯುತ ಬಂದ ಕೆಂಪು ದಾಸವಾಳದ
ಗಗನ ಸಖಿ ಹೇಳಿದಳು:
"Tighten your Belt Sir..."
ಹಾಗೆ, ಕಿಂಡಿಯಂತ ಕಿಟಕಿಯ ಇಣುಕಿದೆ
ಹಾಲಿನ ಸಾಗರದಲ್ಲಿ ಹಡಗಿನಂತೆ

ಎಲ್ಲೆಲ್ಲೂ ಮೋಡಗಳ ಬಲೆ
ತಕ್ಷಣ T.V ಯಲಿ ನೋಡಿದ್ದು ನೆನಪಾಯ್ತು
ರಾಮಾಯಣ
ಆ ರಾಮ... ಆ ಸೀತೆ.. ರಾವಣ... ಹನುಮ
ಅವತ್ತು ತಾತ ಹೇಳಿದ್ದ
"ಸೇತುವೆ ಕಟ್ಟಲು ನಮ್ಮ ಕಾಡಿನ ಕಪಿಗಳೆಲ್ಲ ಹೋಗಿದ್ವಂತೆ"
ತಕ್ಷಣ ನೆನಪಾಗಿ
ರಾಮ ಸೇತು ಕಾಣಬಹುದೆಂದು
ಕಿಟಕಿಯಿಂದ ಇಣುಕಿ ಹುಡುಕಾಡಿದೆ
ನೀಲಾಕಾಶದ ಸಾಗರದಲ್ಲೆಲ್ಲೂ
ಅದರ ಕುರುಹುಗಳಿಲ್ಲ...

ಹಾಗೆ, ಮೆಲ್ಲನೆ ಸೀಟಿಗೆ ಹೊರಗಿ ಕಣ್ಣು ಮುಚ್ಚಿದೆ
ಮತ್ತೆ ಏನೋ ಹೊಳೆದಂತಾಗಿ
ಕಿಟಗಿಯ ಕಡೆ ಹೊರಳಿ ಹುಡುಕಾಡಿದೆ
ಅಲ್ಲೆಲ್ಲೂ ನಾರದಮುನಿಗಳೂ ಕಾಣಲಿಲ್ಲ
ಆಗ ಅನಿಸಿತು
ಇದು ರಾಮಾಯಣ ಅಲ್ಲ
ರಂಗಾಯಣ...

-ರಾಜೀ.