ಶುಕ್ರವಾರ, ಏಪ್ರಿಲ್ 2, 2010

ಮಂಗಳವಾರ, ಫೆಬ್ರವರಿ 2, 2010

ಗೆಳೆಯರೇ, ನಮಸ್ಕಾರ.

ಸಾಂಗತ್ಯದ ಸಿನಿಮಾ ಮ್ಯಾಗಜೈನ್ ಗೆ ಚಂದಾ ಅಭಿಯಾನ ಶುರುವಾಗಿದೆ.

ಬಹಳ ಹುಮ್ಮಸ್ಸಿನಿಂದ ಮ್ಯಾಗಜೈನ್ ತಯಾರಿ ನಡೆದಿದೆ. ಲೇಖನ ಸಂಗ್ರಹ, ವಿನ್ಯಾಸ ಇತ್ಯಾದಿಗಳೆಲ್ಲಾ ಭರದಿಂದ ಸಾಗಿದೆ. ಈ ಮಧ್ಯೆ ರಾಜ್ಯಾದ್ಯಂತ ಚಂದಾದಾರರನ್ನು ಕಲೆಹಾಕಲು ಸಾಂಗತ್ಯದ ಬಳಗದವರು ಹೊರಟಿದ್ದಾರೆ.

ತ್ರೈಮಾಸಿಕವಾಗಿದ್ದು, ಮೂರು ತಿಂಗಳಿಗೊಮ್ಮೆ ಹೊಸರೀತಿಯಲ್ಲಿ ನಿಮ್ಮೆದುರು ಹಾಜರಾಗಬೇಕೆಂಬುದು ಬಳಗದ ಆಸೆ. ಒಂದಿಷ್ಟು ಸಿನಿಮಾಸಕ್ತರೇ ಕೂಡಿಕೊಂಡು ರಚಿಸಿರುವ ಸಾಂಗತ್ಯ ಟ್ರಸ್ಟ್ ಇದರ ಹೊಣೆಯನ್ನು ಹೊತ್ತಿದೆ.

ವಾರ್ಷಿಕ ಚಂದಾ 250 ರೂ. ಬಿಡಿ ಪ್ರತಿಯ ದರ ಇನ್ನೂ ನಿರ್ಧರಿಸಿಲ್ಲ. ವಾರ್ಷಿಕ ಸುಮಾರು 500 ಪುಟದಷ್ಟು ಸಂಗ್ರಹಯೋಗ್ಯ ಸಾಹಿತ್ಯವನ್ನು ಸಿನಿಮಾ ಶಿಕ್ಷಣ ಕುರಿತಾಗಿ ನೀಡುವುದು ನಮ್ಮ ಉದ್ದೇಶ.

ಕನ್ನಡದಲ್ಲಿ ಸಿನಿಮಾ ಶಿಕ್ಷಣಕ್ಕೆಂದು ಮ್ಯಾಗಜೈನ್ ಬಂದದ್ದು ತೀರಾ ಕಡಿಮೆ. ಅದರಲ್ಲೂ ಗಂಭೀರ ನೆಲೆಯಲ್ಲಿ (ಸಾಹಿತ್ಯ ಲೋಕದ ಸಾಕ್ಷಿ, ರುಜುವಾತು, ಸಂಕುಲ,ಸಂಕಲನ, ಸಂಚಯ ಇತ್ಯಾದಿ) ಬಂದ ಪತ್ರಿಕೆಗಳು ಬೆರಳೆಣಿಕೆಯಷ್ಟು. ಸಾಂಗತ್ಯ ಶುರುವಾಗುತ್ತಿರುವುದು ಸಾಹಿತ್ಯ ಲೋಕದ ಅಂಥದೊಂದು ಪರಂಪರೆಯನ್ನು ಸಿನಿಮಾ ಲೋಕದಲ್ಲಿ ಆರಂಭಿಸಬೇಕೆಂದು ಹೊರಟಿದೆ.

ಸಿನಿಮಾ ಇಂದು ನಮ್ಮೆಲ್ಲರ ಮಾಧ್ಯಮವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಹಾಗಾಗಿ ಸಾಂಗತ್ಯ ಈ ಕೆಲಸಕ್ಕೆ ಮುಂದಾಗಿದೆ.

ಚಂದಾ ಆಗಲಿಚ್ಛಿಸುವವರು, ಚಂದಾ ಮಾಡಿ ಕೊಡಲಿಚ್ಛಿಸುವವರು 94807 97113, 94820 73663, 94804 76176 ಗೆ ಸಂಪರ್ಕಿಸಬಹುದು. ನೀವೂ ಚಂದಾದಾರರಾಗಿ, ನಿಮ್ಮ ಗೆಳೆಯರಿಗೂ ಹೇಳಿ, ಮಾಡಿಸಿಕೊಡಿ.

ಶನಿವಾರ, ಡಿಸೆಂಬರ್ 26, 2009

ಅರಳಿದ ಕಣ್ಣಿನಲಿ

1.
ಹೆಪ್ಪುಗಟ್ಟಿದ ಮೋಡ ಮಳೆ ಸುರಿಸಿತು
ಭಾರವಾದ ದು:ಖ ಕಣ್ಣೀರು ಹರಿಸಿತು
ತಿಳಿಯಾದ ಆಗಸ
ಹಗುರವಾದ ಹೃದಯ
ತಣಿದ ಇಳೆ
ಹಸಿರು ತುಂಬಿತು ಅರಳಿದ ಕಣ್ಣಿನಲಿ

2.
ತೊಟ್ಟಿಲಿಗೆ
ಸೂರ್ಯಕಾಂತಿ ಹರಿದಾಳೆ
ಬೆಡಗು ಬಿನ್ನಾಣಗಿತ್ತಿಯರು ಕನಸ ನೆಟ್ಯಾರೆ
ತನು ಕೆಂಪು, ಮನ ತಂಪು
ಮುಂಗಾರಿನ ಜೊತೆ ಓಕುಳಿಯಾಟ
ಸರಸ ಸಲ್ಲಾಪ

3.
ಯೋಧರಂತೆ ನಿಂತ ನಾರಿಯರು
ಎಚ್ಚರದ ಸ್ಥಿತಿ
ತನು ಮನ ಒಂದಾಗಿತ್ತು
ಎಲ್ಲರು ತಮ್ಮ ತಮ್ಮ ಇಷ್ಟಕ್ಕೆ
ಕೂಡಿ ನಡೆಯುತ್ತಿದ್ದಾರೆ
ಸಂತಸ ಸಂಭ್ರಮದ ಮನೆಯಲ್ಲಿ

( ಡಿಸೆಂಬರ್ 2006 ರ ಮಯೂರದಲ್ಲಿನ 'ಕಲ್ಪನೆ' ವಿಭಾದಲ್ಲಿ ಪ್ರಕಟಗೊಂಡ ಪದ್ಯಗಳು. ಲೋಕೇಶ್ ಮೊಸಳೆ ಅವರ ಚಿತ್ರಕ್ಕೆ ಬರದದ್ದು. )

ಕ್ಷಮೆ

ನಾನು ಕ್ಷಮೆ ಬೇಡಿದೆ
ನೀವು ಕ್ಷಮಿಸಿದಿರಿ...
ಹೃದಯದಲ್ಲಿನ ದುಗುಡ, ಅಸಹನೆ...ಕಡಿಮೆ ಆಗಿಲ್ಲ,
ಗಾಯ ಮಾಸುತ್ತಿಲ್ಲ...?
ಬಹುಶ:....
ನನ್ನ ತಪ್ಪನ್ನ ನಾನೇ ಕ್ಷಮಿಸಿಲ್ಲ?
ರಾಜಿ.

Photo Courtesy: tsdi.wordpress.com, blogtext.org, 4catholiceducators.com, aboundlessworld.com,
davekat.net, sodahead.com, covershut.com, palomapentarian.wordpress.com, rkpaulbengalart.com

ಮಂಗಳವಾರ, ಡಿಸೆಂಬರ್ 1, 2009

ಭಾನುವಾರ, ನವೆಂಬರ್ 29, 2009


ಬಯಲು ಸೀಮೆಯವನಾದ ನನಗೆ
ಗಣೇಶನನ್ನು ಕೆರೆಯಲ್ಲಿ ಬಿಡಲು ಹೋಗಿ
ಗೆಳೆಯನನ್ನು ಕಳೆದುಕೊಂಡದ್ದು ಮಾತ್ರ ನೆನಪು.


ನೆರೆ ಬಂದು ನನ್ನ ಕುಟುಂಬ
ಕೊಚ್ಚಿ ಹೋದದ್ದು ನನ್ನ ಕಣ್ಣಿಂದ
ಇನ್ನೂ ಮಾಸಿರಲಿಲ್ಲ....ಅಷ್ಟರಲ್ಲೆ,

ಅಂದು ಟೀವಿಯಲ್ಲಿ
ಸುನಾಮಿಯ ಕಡಲಾಟ

ನಿನಗೆ ಮೂಗುದಾರ ಹಾಕಿದವರು, ಕೈಮುಗಿದವರು
ಎಂದೂ ಬಗೆಯದೆ, ಎಲ್ಲವನ್ನು ಎಲ್ಲರನ್ನು ಕಡೆದು
ಒಮ್ಮೆಯೇ ಆವರಿಸಿ
ನಮ್ಮ ಧರ್ಮ ಧಿಗ್ಭಾಲಕರನ್ನು ಬಿಡದೆ
ನುಂಗಿಕೊಂಡ ನೀನು ನರಭಕ್ಷಕಿ.!

ನಾನು ಮನುಜ ಪಕ್ಷಪಾತಿ.

A young boy mourns the loss of his mother

ಬುಧವಾರ, ನವೆಂಬರ್ 25, 2009

ನನ್ನ ಹಳೆಯ ಕೆಲವು ಪದ್ಯಗಳು


ಅರಿವಿಗಾಗಿ ಗುರುವಿನೆಡೆಗೆ

ತಪಸ್ಸಿಗೆಂದು ಬೋಧಿ ವೃಕ್ಷದ ಕೆಳಗೆ ಕುಳಿತಾಯ್ತು

ಈ ಸಂತೆಯಿಂದ ದೂರ ಸರಿದು ಕಾಡು ಸೇರಾಯ್ತು

ಜಪ ತಪವೆಂದೆಲ್ಲ ಸಮಯ ಕಳೆದಾಯ್ತು ವಿಜ್ಞಾನವ ತಿಳಿದಾಯ್ತು

ತಂತ್ರ ಮಂತ್ರವ ಅಳೆದಾಯ್ತು

ಪಂಚ ಭೂತಗಳೊಂದಿಗೆ ಸಂಘರ್ಷ ಮಾಡಿದರೂ ಕಾಣಲಿಲ್ಲ ಬೆಳಕು?

ಸೋತು ಅಲೆಮಾರಿಯಾಗಿ ಅಲೆಯುತ್ತಿದ್ದೆ

ಗೊಂದಲದ ಗೂಡಿನಲ್ಲಿ ಬಂದಿಯಾಗಿದ್ದೆ

ತಿರಸ್ಕಾರದ ಮನಸ್ಸು ಬುದ್ದಿಯ ಕಟುಕಿತ್ತು

ಅಂದು.! ಮುಸ್ಸಂಜೆಯ ಮಳೆಯಲ್ಲಿ ನಿನ್ನ ಕಂಡ ನಾನು

ಒಲವಿನ ಬಲೆಯಲ್ಲಿ ಸಿಲುಕಿ ನಿನಗಾಗಿ ಹಂಬಲಿಸಿದಾಗ

ನೀ ಬಂದು ನನ್ನ ಬಿಗಿದಪ್ಪಿ ಕಾದ ತುಟಿಗಳಿಂದ ಚುಂಬಿಸಿದಾಗ

ಪಂಚೇಂದ್ರಿಯಗಳು ಹತ್ತಿ ಉರಿದಿತ್ತು

ಆ ಕ್ಷಣ ನಾನು ನಾನಲ್ಲ ನೀನು ನೀನಲ್ಲ

ಭೂತ ಮಾಯವಾಗಿ, ಭವಿಷ್ಯ ಕುರುಡಾಗಿ, ಕಾಲ ಕರಗುತಿತ್ತು...

ನೀ ನನ್ನ ಗುರುವಾಗಿದ್ದೆ. ನಾ ನಿನ್ನ ಮಗನಾಗಿದ್ದೆ

ರಾಜಿ. 4-10-2003

ಕಬ್ಬಿಣದ ಸರಳುಗಳ ಹಿಂದೆ

ಕನಸುಗಳ ಬಂಧನದಲ್ಲಿರುವ

ಆ ಎರಡು ಬೆಳಕಿನ ಕಿಟಕಿಯಲ್ಲಿ

ಕಂಡ ಜಗತ್ತುಗಳೆಷ್ಟೊ?

ಕಾಣದ ಲೋಕಗಳೆಷ್ಟೊ

ರಾಜಿ.


ಮರಳುಗಾಡಿನಲ್ಲಿ ಮೋಡಗಳು ಚದುರಿ

ನೆಲವು ಇಬ್ಬನಿಯ ಹೀರಿದಾಗ

ಒಣಗಿದ್ದ ಬೀಜ ಮೊಳೆತಿತ್ತು
ರಾಜಿ.