ಗುರುವಾರ, ನವೆಂಬರ್ 13, 2008

೧. ತಂಗಿಯ ಕತೆ

ನನ್ನವ್ವ ತಂಗಿಯ ಹೆತ್ತಾಗ
ಮುತ್ತಿಕ್ಕಿ.. ಮುತ್ತಿಕ್ಕಿ.. ಮುದ್ದಾಡಿದರು

ನಡೆದಾಗ,
ಬಣ್ಣದ ಬಟ್ಟೆಯ ತೊಡಿಸಿ, ದೃಷ್ಠಿ ಬೊಟ್ಟನಿಟ್ಟವರು

ಬುಜದೆತ್ತರಕೆ ಬೆಳೆದಾಗ
ಲಂಗದವಣಿಯ ತೊಡಿಸಿ ಚಿನ್ನ ಬಣ್ಣವನಿಕ್ಕಿದರು

ಮದುವಣಗಿತ್ತಿಯ ಶೃಂಗಾರ ಮಾಡಿ
ಕನಸ ಕಂಡವರು

ಅತ್ತಾಗ
ತಬ್ಬಿಕೊಂಡು ಅತ್ತರು

ನಕ್ಕಾಗ
ಕಷ್ಟ ನಷ್ಟಗಳ ಮರೆತವರು

ಒಮ್ಮೆ ಅವಳು
ಪಕ್ಕದೂರಿನ ಕಪ್ಪು ಗುಲಾಬಿಯ
ಮೆಚ್ಚಿ ಮುಡಿದುದ ಕಂಡು ಕರುಬಿದರು

ಬೀದಿಯ ಬಾಯಿಗೆ ಅಂಜಿದವರು

ಅವಮಾನದ ಮಬ್ಬಿಗೆ ಸಿಲುಕಿದರು..
.............................

ಅವಳ
ಬೆಂಕಿಗೆ ಬಲಿಯ ನೀಡಿದರು
..............................

ನನ್ನ ಜನ

-ರಾಜೇಶ್

3 comments:

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ಯಾಕೋ ಸಿದ್ದಲಿಂಗಯ್ಯ ಅವರ ಸಾವಿರಾರು ನದಿಗಳು ಕವನ ನೆನಪಾಯಿತು.
"ಒಮ್ಮೆ ಅವಳು
ಪಕ್ಕದೂರಿನ ಕಪ್ಪು ಗುಲಾಬಿಯ
ಮೆಚ್ಚಿ ಮುಡಿದುದ ಕಂಡು ಕರುಬಿದರು" -ಇನ್ನೂ ಈ ರೀತಿ ಕರುಬೋರು ನಿಂತಿಲ್ಲ..ಸಮಾಜ ಕಣ್ತೆರೆದು ನೋಡಿ ಸುಮ್ಮನಾಗುತ್ತೆ. ನಮ್ಮಂತೋರು ನೋಡಿ ಮಮ್ಮರ ಮರುಗುತ್ತೇವೆ. ಪ್ರಯೋಜನ?....!
ಚೆನ್ನಾಗಿದೆ..ಇನ್ನಷ್ಟು ಬರೆಯಿರಿ..'ನೀಲಾಗಾರ' ದಲ್ಲಿ ಬರಹಗಳ ಸಾಗರವಾಗಲಿ
ತುಂಬು ಪ್ರೀತಿಯಿಂದ,
ಚಿತ್ರಾ

Unknown ಹೇಳಿದರು...

i can grasp every word and the deep pain behind it.... i too i feel the same pain when i think of her......she reflected us,the persona of our people.....and warned us "BEWARE of them......"

Harshini ಹೇಳಿದರು...

hmmm... has a very good theme.. lookin forward for more such writings.. :) :)