ಬಯಲು ಸೀಮೆಯವನಾದ ನನಗೆ
ಗಣೇಶನನ್ನು ಕೆರೆಯಲ್ಲಿ ಬಿಡಲು ಹೋಗಿಗೆಳೆಯನನ್ನು ಕಳೆದುಕೊಂಡದ್ದು ಮಾತ್ರ ನೆನಪು.
ನೆರೆ ಬಂದು ನನ್ನ ಕುಟುಂಬ
ಕೊಚ್ಚಿ ಹೋದದ್ದು ನನ್ನ ಕಣ್ಣಿಂದ
ಇನ್ನೂ ಮಾಸಿರಲಿಲ್ಲ....ಅಷ್ಟರಲ್ಲೆ,
ಅಂದು ಟೀವಿಯಲ್ಲಿ
ಸುನಾಮಿಯ ಕಡಲಾಟ
ನಿನಗೆ ಮೂಗುದಾರ ಹಾಕಿದವರು, ಕೈಮುಗಿದವರು
ಎಂದೂ ಬಗೆಯದೆ, ಎಲ್ಲವನ್ನು ಎಲ್ಲರನ್ನು ಕಡೆದು
ಒಮ್ಮೆಯೇ ಆವರಿಸಿ
ನಮ್ಮ ಧರ್ಮ ಧಿಗ್ಭಾಲಕರನ್ನು ಬಿಡದೆ
ನುಂಗಿಕೊಂಡ ನೀನು ನರಭಕ್ಷಕಿ.!
ನಾನು ಮನುಜ ಪಕ್ಷಪಾತಿ.
